ಚಿಕ್ಕಬಳ್ಳಾಪುರದಲ್ಲಿ ಬೀಡು ಬಿಟ್ಟಿದೆ ಒಂದು ಸೀಕ್ರೆಟ್ ಟೀಂ - India Today Kannada

Papermag-smooth

Expect the News First..Take Another Look..

Home Top Ad

Responsive Ads Here

Post Top Ad

Saturday, 10 March 2018

demo-image

ಚಿಕ್ಕಬಳ್ಳಾಪುರದಲ್ಲಿ ಬೀಡು ಬಿಟ್ಟಿದೆ ಒಂದು ಸೀಕ್ರೆಟ್ ಟೀಂ

Responsive Ads Here
sud-web

ಇದು ನಿಜಕ್ಕೂ ಶಾಕಿಂಗ್ ಸುದ್ದಿ. ಚಿಕ್ಕಬಳ್ಳಾಪುರದಲ್ಲಿ ಇಂಥವ್ರೂ ಇದಾರಾ ಅಂತ ಜನ ಆಲೋಚನೆ ಮಾಡಬೇಕಾದ ಸುದ್ದಿ. ಯಾಕಂದ್ರೆ, ರಾಜಕೀಯಕ್ಕಾಗಿ ಚಿಕ್ಕಬಳ್ಳಾಪುರದಲ್ಲಿ ತೀವ್ರವಾದ ಹಗ್ಗ ಜಗ್ಗಾಟ ನಡೆದಿದ್ದು, ಶಾಸಕ ಡಾ.ಕೆ.ಸುಧಾಕರ್ ವಿರುದ್ಧವೇ ಕೆಲವರು ಕತ್ತಿ ಮಸೀತಿದ್ದಾರೆ.

ಡಾ.ಕೆ.ಸುಧಾಕರ್ ಶಾಸಕರಾಗುವ ಮೊದಲಿಂದಲೂ ಚಿಕ್ಕಬಳ್ಳಾಪುರದ ಜನರ ಸೇವೆಯನ್ನ ಮಾಡ್ತಾನೇ ಬಂದಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ರೂ, ಹಿಂದೆಂದೂ ಕಂಡು ಕೇಳರಿಯದಂಥಾ ಅಭಿವೃದ್ದಿಯನ್ನು ಮಾಡಿದ್ದಾರೆ. ಇವರ ಚಿಂತನೆಗಳು ಮತ್ತು ಕಾರ್ಯವೈಖರಿಯನ್ನು ಖುದ್ದು ಸಿಎಂ ಸಿದ್ದರಾಮಯ್ಯನವರೇ ಮೆಚ್ಚಿದ್ದಾರೆ. ಆದ್ರೆ ಇದು ಕೆಲವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಡಾ.ಕೆ.ಸುಧಾಕರ್ ವಿರುದ್ಧ ಕೆಲವರು ಷಡ್ಯಂತ್ರವನ್ನು ರೂಪಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಬೀಡು ಬಿಟ್ಟಿದೆ ಒಂದು ಸೀಕ್ರೆಟ್ ಟೀಂ
ಹೌದು. ಚಿಕ್ಕಬಳ್ಳಾಪುರದ ಒಂದು ನಿಗೂಢ ಸ್ಥಳದಲ್ಲಿ ಒಂದು ತಂಡ ಬೀಡು ಬಿಟ್ಟಿದ್ದು, ಡಾ.ಕೆ.ಸುಧಾಕರ್ ಅವ್ರ ವಿರುದ್ಧ ಅಪಪ್ರಚಾರ ಮಾಡುವುದು ಹೇಗೆ? ಜನರ ಹಾದಿ ತಪ್ಪಿಸುವುದು ಹೇಗೆ ಎಂಬ ಇತ್ಯಾದಿ ವಿಚಾರಗಳ ಬಗ್ಗೆ ದೊಡ್ಡಮಟ್ಟದ ಚರ್ಚೆಯೂ ನಡೆದಿದ್ದು, ಜನಪರ ನಾಯಕನನ್ನು ಸೋಲಿಸಲು ದೊಡ್ಡ ಮಟ್ಟದ ಪ್ಲಾನ್ ರೂಪಿಸಿದ್ದಾರೆ.

ಅಭಿವೃದ್ಧಿ ಕೆಲಸಗಳೇ ಡಾ. ಸುಧಾಕರ್ ಅವರಿಗೆ ಮುಳ್ಳಾಯ್ತಾ?
ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರದ ಶಾಸಕರಾಗಿ ಆಯ್ಕೆಯಾಗಿದ್ದು ಇದೇ ಮೊದಲಬಾರಿ. ಆದ್ರೆ ಹಿಂದಿನ ಯಾವ ಶಾಸಕರೂ ಮಾಡದಷ್ಟು ಅಬಿವೃದ್ಧಿಯನ್ನು ಮಾಡಿದ್ದಾರೆ. ಹೊಸ ಲೈಬ್ರರಿ, ಸರ್ಕಾರಿ ಆಸ್ಪತ್ರೆಯ ಮರುನಿರ್ಮಾಣ, ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣ, ಹೀಗೆ ನಾನಾ ಕಾರ್ಯಯೋಜನೆಗಳ ಮೂಲಕ ಚಿಕ್ಕಬಳ್ಳಪುರದ ದಿಕ್ಕನ್ನೇ ಬದಲಿಸಿದ್ದಾರೆ

ಬಡವರಿಗೆ ಆಶ್ರಯ ಮನೆಗಳನ್ನು ನೀಡಿದ್ದಾರೆ. ಬಹುತೇಕ ಹಳ್ಳಿಗಳಿಗೆ ಉತ್ತಮ ರಸ್ತೆಗಳನ್ನ ನಿರ್ಮಿಸಿದ್ದಾರೆ. ಇನ್ನೂ ಅನೇಕ ಹಳ್ಳಿಗಳಿಗೆ ರಸ್ತೆ ನಿರ್ಮಿಸುವ ಕಾಮಗಾರಿನೂ ನಡೀತಿದೆ. ಇದರ ಜೊತೆಗೆ ಫ್ಲೋರೈಡ್ ನೀರು ಕುಡಿಯುತ್ತಿದ್ದ ಜಿಲ್ಲೆಯ ಜನತೆಗೆ ಶುದ್ಧ ಕುಡಿಯುವಬ ನೀರಿನ ವ್ಯವಸ್ಥೆಯನ್ನೂ ಮಾಡಿದ್ದಾರೆ. ಈ ಎಲ್ಲಾ ಜನಪರ ಕೆಲಸಗಳಿಂದ, ಅತಿ ಶೀಘ್ರದಲ್ಲೇ ಡಾ.ಕೆ.ಸುಧಕರ್ ಎಲ್ಲರ ಮನೆ ಮಾತಾದ್ರು. ಇದು ಕೆಲವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಡಾ.ಸುಧಾಕರ್ ಈಬಾರಿ ಗೆದ್ದರೆ ಕ್ಷೇತ್ರದ ಜನತೆ ಸುಧಾಕರ್ ಅವರನ್ನು ಬಿಟ್ಟು ಉಳಿದವರನ್ನು ಮರೆತೇ ಬಿಡುತ್ತಾರೆ ಎಂದು ಕಳವಳಗೊಂಡ ಕೆಲವರು, ತಮ್ಮ ರಾಜಕೀಯ ದುರಾಸೆಗಾಗಿ ಡಾ.ಸುಧಕರ್ ವಿರುದ್ಧ ಡೊಡ್ಡ ಮಟ್ಟದ ಷಡ್ಯಂತ್ರಗಳನ್ನು ರೂಪಿಸುತ್ತಿದ್ದಾರೆ.

ಸುಧಾಕರ್ ಬೆನ್ನಿಗೆ ನಿಂತ ಕ್ಷೇತ್ರದ ಜನತೆ
ಡಾ.ಕೆ.ಸುಧಕರ್ ವಿರುದ್ಧ ಸೀಕ್ರೆಟ್ ಸ್ಥಳದಲ್ಲಿ ಒಂದು ಭಯಾನಕವಾದ ತಂಡ ಮಸಲತ್ತು ಮಾಡ್ತಿದೆ. ಆದ್ರೆ ಡಾ.ಸುಧಕರ್ ಅವರ ಜನಪರ ಕಾರ್ಯಕಗಳನ್ನು ನೋಡಿದ ಕ್ಷೇತ್ರದ ಜನತೆ ಡಾ.ಸುಧಾಕರ್ ಅವರ ಬೆನ್ನಿಗೆ ನಿಂತಿದ್ದಾರೆ. ಈ ಬಾರಿಯೂ ಮತ್ತೆ ಡಾ.ಸುಧಕರ್ ಅವರೇ ಗೆಲ್ಲಬೇಕು ಅಂತ ಇಚ್ಚೆ ಪಡ್ತಿದ್ದಾರೆ.

ಡಾ.ಕೆ.ಸುಧಕರ್ ಸೋತರೆ ಚಿಕ್ಕಬಳ್ಳಾಪುರಕ್ಕೆ ಆಪತ್ತು?
೧೦ ವರ್ಷಗಳ ಹಿಂದೆ ಜಿಲ್ಲಾಕೇಂದ್ರವಾಗಿ ಆಯ್ಕೆಯಾಗಿದ್ರೂ, ಚಿಕ್ಕಬಳ್ಳಾಪುರದ ಅಭಿವೃದ್ಧಿ ಆಗೇ ಇರಲಿಲ್ಲ. ಆದ್ರೆ ಡಾ.ಸುಧಕರ್ ಚಿಕ್ಕಬಳ್ಳಪುರಕ್ಕೆ ಏನೆಲ್ಲಾ ಬೇಕೋ, ಆ ಎಲ್ಲಾ ಯೋಜನೆಗಳನ್ನ ರೂಪಿಸಿ, ಜಿಲ್ಲಾಕೇಂದ್ರಕ್ಕೆ ಬೇಕಾದ ಮೆರುಗನ್ನು ತಂದುಕೊಟ್ಟರು. ರೈತರು, ವಿದ್ಯಾರ್ಥಿಗಳು, ಮಹಿಳೆಯರು, ಅಲ್ಪ ಸಂಖ್ಯಾತರು ಎಲ್ಲರೊಂದಿಗೂ ಹೆಜ್ಜೆ ಹಾಕಿದ್ರು. ಇಂಥಾ ಸುಧಾಕರ್ ವಿರುದ್ಧ ಭಾರೀ ದೊಡ್ಡ ಷಡ್ಯಂತ್ರ ನಡೀತಿತ್ತು, ಜನರ ದಿಕ್ಕು ತಪ್ಪಿಸೋ ಆಲೋಚನೆ ನಡೀತಿದೆ. ಒಂದು ವೇಳೆ ಈಸಲದ ಎಲೆಕ್ಷನ್‌ನಲ್ಲಿ ಡಾ.ಸುಧಾಕರ್ ಅವರು ಗೆಲ್ಲದೇ ಇದ್ರೆ, ವಿರೋಧಿಗಳು ಇಡೀ ಚಿಕ್ಕಬಳ್ಳಾಪುರಕ್ಕೇ ಉರಿದು ಮುಕ್ಕಲಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಫುಲ್ ಸ್ಟಾಪ್ ಬೀಳಲಿದೆ. ಸುಖಾ ಸುಮ್ಮನೆ ಗಲಭೆಗಳನ್ನು ಸೃಷ್ಟಿಸಿ, ಕ್ಷೇತ್ರದ ಜನರನ್ನ ತತ್ತರಿಸುವಂತೆ ಮಾಡೋ ಪ್ಲಾನ್‌ನಲ್ಲಿದ್ದಾರೆ ಡಾ.ಕೆ.ಸುಧಕರ್ ಅವ್ರ ವಿರೋಧಿಗಳು. ಹೀಗಾಗಿ ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆಯ ಹಿತದೃಷ್ಟಿಗಾಗಿ ಡಾ.ಕೆ.ಸುಧಕರ್ ಅವ್ರನ್ನು ಮತ್ತೊಮ್ಮೆ ಗೆಲ್ಲಿಸಲೇಬೇಕಿದೆ ಅಂತಿದ್ದಾರೆ ರಾಜಕೀಯ ವಿಶ್ಲೇಷಕರು.

No comments:

Post a Comment

banner-final

Post Bottom Ad

Pages