ಏಲಿಯನ್​ಗಳಿಗೂ ಸ್ಟೀಫನ್ ಸಾವಿಗೂ ನಂಟಿದೆಯಾ? - India Today Kannada

India Today Kannada

Expect the News First..Take Another Look..

Breaking

Home Top Ad

Responsive Ads Here

Post Top Ad

Responsive Ads Here

Wednesday 14 March 2018

ಏಲಿಯನ್​ಗಳಿಗೂ ಸ್ಟೀಫನ್ ಸಾವಿಗೂ ನಂಟಿದೆಯಾ?


ಬ್ರಹ್ಮಾಂಡ ರಹಸ್ಯವನ್ನು ಭೇದಿಸಿದ ಸ್ಟೀಫನ್​ ಹಾಕಿನ್ಸ್​​  ವಿಧಿವಶ

ಸ್ಟೀಫನ್​ ಹಾಕಿನ್ಸ್  ಬುಧವಾರ ಬೆಳಗಿನ ಜಾವ ​​ ವಿಧಿವಶರಾಗಿದ್ದಾರೆ. ಇಂಗ್ಲೆಂಡ್​ನ ಕೇಂಬ್ರಿಡ್ಜ್​​​ ನಲ್ಲಿರೋ ತಮ್ಮ ನಿವಾಸದಲ್ಲಿ ಜಗದ್ವಿಖ್ಯಾತ ಭೌತ ವಿಜ್ಞಾನಿ ವಿಧಿವಶರಾಗಿದ್ದಾರೆ. ಸ್ಟೀಫನ್ ಹಾಕಿನ್ಸ್​ ಸಾವಿನ ಸುದ್ದಿ ಕೇಳಿದ ಇಡೀ ಜಗತ್ತು ಶಾಕ್ ಆಗಿದೆ.

‘ಎ ಬ್ರೀಫ್​​ ಹಿಸ್ಟರಿ ಆಫ್​​ ಟೈಂ’ ಅನ್ನೋ ಪುಸ್ತಕವನ್ನ ಬರೆದಿದ್ದ ಜಗತ್ತಿನ ಶ್ರೇಷ್ಠ ಭೌತವಿಜ್ಷಾನಿ ಸ್ಟಿಫನ್​​ ವಿಲಿಯಂ ಹಾಕಿಂಗ್, ಅದ್ರಲ್ಲಿ ಭಯಂಕರವಾದ ವಿಚಾರಗಳನ್ನ ಜಗತ್ತಿನ ಮುಂದೆ ಬಿಚ್ಚಿಟ್ಟಿದ್ರು. ಇಡೀ ದೇಹವೇ ನಿಶ್ಚಲ ಸ್ಥಿತಿಯಲ್ಲಿದ್ರೂ ಮಾತಾಡೋದಕ್ಕೂ ಸಾಧ್ಯವಾಗದಂಥಾ ಸ್ಥಿತಿಯಲ್ಲಿದ್ರೂ ವಿಜ್ಞಾನಿಗಳನ್ನೇ ದಂಗಾಗಿಸುವಂಥಾ ಸಂಶೋಧನೆಗಳನ್ನ ಮಾಡಿದ್ರು.. ಇಂಥಾ ವಿಜ್ಞಾನಿಗೆ ‘ಮೋಟಾರ್​​ ನ್ಯೂರಾನ್’ ಅನ್ನೋ ​​ ವಿಚಿತ್ರ ಖಾಯಿಲೆ ಕಾಡ್ತಾ ಇತ್ತು. ಈ ನರಸಂಬಂಧಿ ಕಾಯಿಲೆಯಿಂದ ತತ್ತರಿಸಿದ್ದ ಸ್ಟೀಫನ್​​ ಬುಧವಾರ ನಿಧನರಾದರು.

ಆದ್ರೆ ಸಾಯೋದಕ್ಕೂ ಮೊದಲು ಸ್ಟೀಫನ್ ಹಾಕಿನ್ಸ್​ ಎರಡು ವಿಚಾರಗಳನ್ನ ಜಗತ್ತಿನ ಮುಂದೆ ಬಿಚ್ಚಿಟ್ಟಿದ್ದಾರೆ. ಬ್ರಹ್ಮಾಂಡದಲ್ಲಿ ಆಗ್ತಾ ಇರೋ ಒಂದಷ್ಟು ಬದಲಾವಣೆಗಳು, ಭೂಮಂಡಲವನ್ನೇ ಬುಡಮೇಲು ಮಾಡುತ್ತೆ ಅನ್ನೋ ಬೆಚ್ಚಿ ಬೀಳಿಸುವ ಅಂಶವನ್ನ ಸ್ಟೀಫನ್​ ಹೊರ ಹಾಕಿದ್ರು ಅಂತ ಹೇಳಲಾಗ್ತಿದೆ.

100 ವರ್ಷಗಳಲ್ಲಿ ಮಾನವರು ಭೂಮಿ ಬಿಡಬೇಕೆಂದು ಎಚ್ಚರಿಕೆ!

ಸ್ಟೀಫನ್ ಹಾಕಿನ್ಸ್​ ಬಿಚ್ಚಿಟ್ಟ ಮೊದಲನೇ ರಹಸ್ಯ ಇದು.. ಈ ಭೂಮಿ ಮೇಲೆ  ಇರೋದಕ್ಕೆ ಮನುಷ್ಯರಿಗೆ 100 ವರ್ಷ ಮಾತ್ರ ಟೈಮು.. ಮುಂದಿನ 100 ವರ್ಷಗಳಲ್ಲಿ ಈ ಭೂಮಿಯನ್ನ ಬಿಡಬೇಕಾಗುತ್ತೆ.. ಇಲ್ದಿದ್ರೆ, ಮನುಕುಲಕ್ಕೆ ದೊಡ್ಡ ಆಪತ್ತು ಎದುರಾಗುತ್ತೆ ಅಂತ, ಖಡಕ್ ಎಚ್ಚರಿಕೆಯನ್ನ ನೀಡಿದ್ರು ಸ್ಟೀಫನ್.

‘ಬ್ಲಾಕ್​ ಹೋಲ್​​’ ಬಗ್ಗೆ ಸ್ಟೀಫನ್​ ಹಾಕಿನ್ಸ್ ಬಿಚ್ಚಿಟ್ಟ ರಹಸ್ಯವೇನು?

ಸ್ಟೀಫನ್ ಹಾಕಿನ್ಸ್ ಬ್ಲಾಕ್​ಹೋಲ್​ಗಳ ಬಗ್ಗೆನೂ ಸಾಕಷ್ಟು ಸಂಶೋಧನೆಗಳನ್ನ ಮಾಡಿದ್ದಾರೆ. ಬ್ರಹ್ಮಾಂಡದ ಬಕಾಸುರ ಅಂತಲೇ ಕರೆಯಲಾಗೋ ಕಪ್ಪು ರಂಧ್ರಗಳು, ಇಡೀ ಸೌರಮಂಡಲವನ್ನೇ ಆಹುತಿ ಪಡೆಯಲಿದೆ ಅನ್ನೋ ಬೆಚ್ಚಿ ಬೀಳಿಸುವ ಸತ್ಯವನ್ನು ಸ್ಟೀಫನ್ ಹಾಕಿನ್ಸ್ ಹೊರ ಹಾಕಿದ್ದಾರೆ. ಈ ವಿಷ್ಯ ಕೇಳಿ, ಇಡೀ ಜಗತ್ತೇ ಕಂಗಾಲಾಗಿದೆ.

ಏಲಿಯನ್​ಗಳಿಗೂ ಸ್ಟೀಫನ್ ಸಾವಿಗೂ ನಂಟಿದೆಯಾ?

ಏಲಿಯನ್​​​ಗಳ ಮಾಹಿತಿಯನ್ನ ಸ್ಟೀಫನ್​​ ಗಮನಿಸ್ತಾ ಇದ್ರು. ಆದ್ರಿದು ಏಲಿಯನ್​ಗಳ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿತ್ತು ಅನ್ನೋದು ಹಲವರ ಅಭಿಪ್ರಾಯ. ತನಗೆ ಕಂಟಕವಾಗಿ ಪರಿಣಮಿಸಿದ್ದ ಸ್ಟೀಫನ್​​ ವಿರುದ್ಧ ಸೇಡು ಏಲಿಯನ್​​ಗಳಿಗೆ ತೀರಿಸಿಕೊಳ್ಳೋದಕ್ಕೆ ಟ್ರೈ ಮಾಡ್ತಿದ್ವು ಅನ್ನೋ ಅನುಮಾನವನ್ನೂ ಈ ಹಿಂದೆ ಸ್ಟೀಫನ್ ಅವ್ರೇ ಕೆಲವೆಡೆ ವ್ಯಕ್ತಪಡಿಸಿದ್ರು. ಈ ಅನುಮಾನಗಳ ನಡುವಲ್ಲೇ, ಸ್ಟೀಫನ್​​ ವಿಧಿವಶರಾಗಿದ್ದಾರೆ. ಸ್ಟೀಫನ್​ ಸಾವಿನ ಹಿಂದೆ ಬಹುಷಃ ಏಲಿಯನ್​ಗಳು ಇರಬಹುದು ಅನ್ನೋ ಶಂಕೆ ಹಲವರದ್ದು. ಆದ್ರಿದು ಎಷ್ಟು ಸತ್ಯವೋ ಎಷ್ಟು ಸುಳ್ಳೋ ಗೊತ್ತಿಲ್ಲ.. ಭೂಮಂಡಲ ಕಂಡ ಬ್ರಹ್ಮಾಂಡ ವಿಜ್ಞಾನಿ ಇಹಲೋಕ ತ್ಯಜಿಸಿರೋದಂತೂ ಸತ್ಯ..

ಸ್ಟೀಫನ್​ಗೆ ಸಿಕ್ಕಿತ್ತಾ ಸಾವಿನ ಮುನ್ಸೂಚನೆ?

ಸ್ಟೀಫನ್ ಹಾಕಿನ್ಸ್​ ಇನ್ನಿಲ್ಲ ಅನ್ನೋದು ಜಗತ್ತು ಅರಗಿಸಿಕೊಳ್ಳೋದಕ್ಕಾಗದ ಸತ್ಯ. ಆದ್ರೆ ತನ್ನ ಬೆನ್ನ ಹಿಂದೆಯೇ ಸಾವು ಕಾದಿದೆ ಅನ್ನೋದನ್ನ ಸ್ಟೀಫನ್​ ತಿಳಿದಿದ್ದ ಅಂತ ಆಪ್ತರು ಹೇಳ್ತಾರೆ. ಆಗಾಗ ಅನ್ಯಗ್ರಹ ಜೀವಿಗಳ ಬಗ್ಗೆ ಹೇಳ್ತಾ ಇದ್ದ ಸ್ಟೀಫನ್​​, ಅವುಗಳಿಗೆ ತೊಡಕಾಗುವಂತಿದ್ರೆ, ಯಾರನ್ನೂ ಬಿಡಲ್ಲ ಅನ್ನೋ ಮಾತನ್ನೂ ಕೆಲವರ ಬಳಿ ಹಂಚಿಕೊಂಡಿದ್ರಂತೆ. ಇನ್ನು ಏಲಿಯನ್​ಗಳು ಏನೇನ್ ಮಾಡುತ್ತೆ ಅನ್ನೋದನ್ನ ತಿಳ್ಕೊಂಡಿದ್ದ ಸ್ಟೀಫನ್​ ಅದನ್ನ ಜನರಿಗೆ ತಿಳಿಸ್ತಾ ಇದ್ದಿದ್ದು, ಎಲ್ಲೋ ಸ್ಟೀಫನ್​ ಸಾವಿಗೆ ಕಾರಣವಾಯ್ತಾ ಅನ್ನೋ ಅನುಮಾನವನ್ನ ಆಪ್ತವಲಯ ವ್ಯಕ್ತಪಡಿಸ್ತಿದೆ.

1 comment:

  1. Play Slots Online | SEGA online casino games - Sega
    You 인카지노 have a chance 샌즈카지노 to 제왕 카지노 try over 250 online casino games – from slots to video poker and a world of online slot machines. Play the best slots on

    ReplyDelete


Post Bottom Ad

Responsive Ads Here

Pages