ಚಿಕ್ಕಬಳ್ಳಾಪುರ ಶಾಸಕರಿಗೆ ವಿರೋಧಿಗಳು ಹುಟ್ಟಿಕೊಂಡಿದ್ದು ಹೇಗೆ ಗೊತ್ತಾ? - India Today Kannada

Papermag-smooth

Expect the News First..Take Another Look..

Home Top Ad

Responsive Ads Here

Post Top Ad

Sunday, 11 March 2018

demo-image

ಚಿಕ್ಕಬಳ್ಳಾಪುರ ಶಾಸಕರಿಗೆ ವಿರೋಧಿಗಳು ಹುಟ್ಟಿಕೊಂಡಿದ್ದು ಹೇಗೆ ಗೊತ್ತಾ?

Responsive Ads Here
%25E0%25B2%25B6%25E0%25B3%2581%25E0%25B2%25A6%25E0%25B3%25A8

ಚಿಕ್ಕಬಳ್ಳಾಪುರದ ಚುನಾವಣಾ ಅಖಾಡ ಈಸಲ ಭಾರೀ ಕಲುತೂಹಲದಿಂದ ಕೂಡಿದ್ದು, ವಿರೋಧಿಗಳು ಎಷ್ಟೇ ಷಡ್ಯಂತ್ರ ಮಾಡಿದ್ರೂ, ಡಾ.ಕೆ.ಸುಧಾಕರ್ ಈಬಾರಿಯೂ ಗೆಲ್ಲೋದು ಗ್ಯಾರಂಟಿ ಅಂತಾರೆ ನಂದಿ ಹೋಬಳಿ ಮಹೇಶ್ ಎಂಬುವವರು. ೫ ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಹೇಗಿತ್ತು? ಈಗ ಹೇಗಿದೆ ಅಂತ ನೋಡಿದ್ರೇನೇ ಬದಲಾವಣೆ ಗೊತ್ತಾಗುತ್ತೆ. ಹೀಗಾಗಿ ಡಾ.ಕೆ.ಸುಧಾಕರ್ ಮತ್ತೊಮ್ಮೆ ಗೆಲ್ಲಲೇಬೇಕು ಅನ್ನೋದು ಸ್ಥಳೀಯರ ಅಭಿಪ್ರಾಯ.

2013ಕ್ಕೂ ಮೊದಲು ಜೆಡಿಎಸ್‌. ಕೆಪಿ ಬಚ್ಚೇಗೌಡ ಇಲ್ಲಿ ಶಾಸಕರಾಗಿದ್ರು. ಆದ್ರೆ ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರ ಅಂತ ಕರೆಯಲಾಗ್ತಿತ್ತೇ ವಿನಹ, ಜಿಲ್ಲಾಕೇಂದ್ರಕ್ಕೆ ಬೇಕಾದ ಮೂಲ ಸೌಕರ್ಯಗಳನ್ನ ಒದಗಿಸಲೇ ಇಲ್ಲ. ಆದ್ರೆ ಡಾ.ಕೆ.ಸುಧಕರ್ ಆಸ್ಪತ್ರೆಯನ್ನು ಹೈಟೆಕ್ ಮಾಡಿದ್ರು. ಡಯಾಲಿಸಿಸ್ ಕೇಂದ್ರವನ್ನ ಮಾಡಿದ್ರು. ಬಸ್ ನಿಲ್ದಾಣಗಳನ್ನ ನಿರ್ಮಿಸಿದ್ರು. ಒಂದು ಮಾದರಿ ಜಿಲ್ಲೆ ಅಂದ್ರೆ ಹೇಗಿರಬೇಕೋ, ಆ ಎಲ್ಲಾ ಸೌಕರ್ಯಗಳನ್ನು ಜಿಲ್ಲೆಗೆ ತಂದ್ರು.. ಸುಧಾಕರ್ ಅವರ ಈ ಕಾರ್ಯಗಳೇ, ಈಸಲದ ಚುನಾವಣೆಯಲ್ಲೂ ಗೆಲುವನ್ನು ತಂದುಕೊಡಲಿದೆ ಅನ್ನೋದು ಹಲವರ ಅಭಿಪ್ರಾಯ.


ಡಾ.ಸುಧಾಕರ್ ಕಥೆ ಮುಗಿಸಲು ಪ್ಲಾನ್?
ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರದ ಶಾಸಕರಾಗಿದ್ದು, ಈ ಹಿಂದೆ ಡಾ.ಕೆ.ಸುಧಾಕರ್ ಅವರ ಜೊತೆಗಿದ್ದವರೇ ಇದೀಗ ಡಾ.ಸುಧಾಕರ್ ಅವರ ಕಥೆ ಮುಗಿಸಲು ಪ್ಲಾನ್ ಮಾಡಿದ್ದಾರೆ. ರಾಜಕೀಯವಾಗಿ ಡಾ.ಸುಧಾಕರ್ ಅವ್ರು ಬೆಳೆಯಬಾರದು ಅಂತ ನಿರ್ಧರಿಸಿರೋ ಕೆಲವರು, ಹಾಲಿ ಶಾಸಕರನ್ನು ರಾಜಕೀಯವಾಗಿ ಮುಗಿಸುವ ಯತ್ನ ಮಾಡ್ತಿದ್ದಾರೆ. ಅಂದ್ಹಾಗೆ ಇಂಥಾ ಪ್ರಯತ್ನವನ್ನ ಮಾಡ್ತಿರೋದಾದ್ರೂ ಯಾರು ಗೊತ್ತಾ? ಚಿಕ್ಕಬಳ್ಳಾಪುರದಲ್ಲಿನ ಕೆಲವು ಭೂಗಳ್ಳರು ಎಂಬ ಶಂಕೆ ಇದೆ.

ಡಾ.ಕೆ.ಸುಧಾಕರ್ ಅವರೇ ಟಾರ್ಗೆಟ್ ಯಾಕೆ?
ಶಾಸಕರಾದ ಆರಂಭದಲ್ಲಿ ಜಿಲ್ಲೆಗೆ ಬೇಕಾದ ಮೂಲ ಸೌರ್ಕರ್ಯಗಳನ್ನು ಕಲ್ಪಿಸಿದ ಡಾ.ಕೆ.ಸುಧಾಕರ್, ನಂತರದಲ್ಲಿ ಭ್ರಷ್ಟರನ್ನು ಬಗ್ಗು ಬಡಿಯೋದಕ್ಕೆ ಮಾಸ್ಟರ್ ಪ್ಲಾನ್ ಅನ್ನ ರೂಪಿಸಿಕೊಂಡಿದ್ರು. ಅದರಂತೆ ಸರ್ಕಾರಿ ಜಮೀನನ್ನು ಯಾರ್ ಯಾರು ಕಬಳಿಸಿದ್ದಾರೆ ಎಂಬ ಮಾಹಿತಿಯನ್ನ ಸೀಕ್ರೆಟಾಗಿ ಕಲೆ ಹಾಕ್ತಾ ಇದೆ ದಕ್ಷ ಅಧಿಕಾರಿಗಳ ತಂಡ. ಈಗಾಗಲೇ ಒಂದಷ್ಟು ಭೂಗಳ್ಳರ ಮಾಹಿತಿಯನ್ನು ಕಲೆ ಹಾಕಲಾಗಿದ್ದು, ಅವರ ವಿರುದ್ಧ ಘರ್ಜನೆ ಮಾಡೋದಕ್ಕೆ ದಕ್ಷ ಅಧಿಕಾರಿಗಳು ರೆಡಿಯಾಗಿದ್ರು ಅಂತ ಹೇಳಲಾಗುತ್ತಿದೆ. ಇದನ್ನು ಅರಿತ ಕೆಲವರು ಡಾ.ಕೆ.ಸುಧಾಕರ್ ಅವರ ಬಳಿ ಬಂದು ರಕ್ಷಣೆಯನ್ನೂ ಕೋರಿದ್ದರು ಎಂಬ ಮಾಹಿತಿ ಇದೆ. ಆದ್ರೆ ಭ್ರಷ್ಟರಿಗೆ ಸೊಪ್ಪು ಹಾಕದೇ ಅಧಿಕಾರಿಗಳ ಪರವಾಗಿ ನಿಂತಿದ್ರು ಡಾ.ಕೆ.ಸುಧಾಕರ್. ಇದರಿಂದ ಕುಪಿತಗೊಂಡ ಕೆಲವರು ಡಾ.ಕೆ.ಸುಧಾಕರ್ ಮತ್ತೊಮ್ಮೆ ಗೆದ್ದರೆ ಭೂಗಳ್ಳತನಕ್ಕೆ ಬ್ರೇಕ್ ಬೀಳುತ್ತೆ ಅಂತ ತಿಳಿದು, ಡಾ.ಕೆ.ಸುಧಾಕರ್ ಅವರನ್ನು ರಾಜಕೀಯವಾಗಿ ಮುಗಿಸಬೇಕು ಅಂತ ಪ್ಲಾನ್ ಮಾಡ್ಕೊಂಡಿದೆ.
ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಒಂದು ಸೀಕ್ರೆಟ್ ಟೀಮ್ ಕೂಡ ಕಟ್ಟಿದ್ದು, ರಹಸ್ಯ ಸ್ಥಳದಲ್ಲಿ ನಿಗೂಢವಾಗಿ ಕಾರ್ಯ ನಿರ್ವಹಿಸ್ತಿದೆ. ಈಸಲ ಹೇಗಾದ್ರೂ ಮಾಡಿ ಡಾ.ಕೆ.ಸುಧಾಕರ್ ಅವರನ್ನು ರಾಜಕೀಯವಾಗಿ ಸೋಲಿಸಿದ್ರೆ, ಮುಂದಿನ ದಿನಗಳಲ್ಲಿ ಯಾವ ಜಮೀನನ್ನು ಬೇಕಾದ್ರೂ ಕಬಳಿಸಬಹುದು ಅನ್ನೋದು ಕೆಲವರ ಲೆಕ್ಕಾಚಾರ.

ಜನ ಏನಂತಾರೆ?
ಸದ್ಯ ಡಾ.ಕೆ.ಸುಧಾಕರ್ ಅವರ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ರಗಳು ನಡೀತಾ ಇದ್ದು, ಜನ ಸಾಮಾನ್ಯರಿಗೂ ಗೊತ್ತಿದೆ. ಡಾ.ಕೆ.ಸುಧಕರ್ ಶಾಸಕರಾಗಿ ಆಯ್ಕೆಯಾದ ನಂತರ ಹಲವು ಜನಪರ ಕೆಲಸಗಳನ್ನ ಮಾಡಿದ್ದಾರೆ. ಒಳ್ಳೆ ಕೆಲಸಗಳನ್ನು ಮಾಡಿದವರಿಗೆ ವಿರೋಧಿಗಳು ಹುಟ್ಟಿಕೊಳ್ಳುವುದು ಸಹಜ. ಆದರೆ, ಜನ ತಂತ್ರಗಾರಿಕೆಗೆ ಬಲಿಯಾಗಬಾರದು. ಡಾ.ಕೆ.ಸುಧಾಕರ್ ಅವರ ವಿರೋಧಿಗಳು ರೂಪಿಸುತ್ತಿರುವ ಷಡ್ಯಂತ್ರಕ್ಕೆ ಬಲಿಯಾಗಬಾರದು ಅಂತ ಕಿವಿಮಾತು ಹೇಳ್ತಾರೆ ಚಿಕ್ಕಬಳ್ಳಾಪುರದ ಹಿರಿಯ ನಾಗರೀಕರಾದ ಶಿವಪ್ಪ.

೫ ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಹೇಗಿತ್ತು? ಈಗ ಹೇಗಿದೆ ಅಂತ ನೋಡಿದ್ರೇನೇ ಬದಲಾವಣೆ ಗೊತ್ತಾಗುತ್ತೆ. ಹೀಗಾಗಿ ಡಾ.ಕೆ.ಸುಧಾಕರ್ ಮತ್ತೊಮ್ಮೆ ಗೆಲ್ಲಲೇಬೇಕು ಅನ್ನೋದು ಸ್ಥಳೀಯರ ಅಭಿಪ್ರಾಯ.

2013ಕ್ಕೂ ಮೊದಲು ಜೆಡಿಎಸ್‌. ಕೆಪಿ ಬಚ್ಚೇಗೌಡ ಇಲ್ಲಿ ಶಾಸಕರಾಗಿದ್ರು. ಆದ್ರೆ ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರ ಅಂತ ಕರೆಯಲಾಗ್ತಿತ್ತೇ ವಿನಹ, ಜಿಲ್ಲಾಕೇಂದ್ರಕ್ಕೆ ಬೇಕಾದ ಮೂಲ ಸೌಕರ್ಯಗಳನ್ನ ಒದಗಿಸಲೇ ಇಲ್ಲ. ಆದ್ರೆ ಡಾ.ಕೆ.ಸುಧಕರ್ ಆಸ್ಪತ್ರೆಯನ್ನು ಹೈಟೆಕ್ ಮಾಡಿದ್ರು. ಡಯಾಲಿಸಿಸ್ ಕೇಂದ್ರವನ್ನ ಮಾಡಿದ್ರು. ಬಸ್ ನಿಲ್ದಾಣಗಳನ್ನ ನಿರ್ಮಿಸಿದ್ರು. ಒಂದು ಮಾದರಿ ಜಿಲ್ಲೆ ಅಂದ್ರೆ ಹೇಗಿರಬೇಕೋ, ಆ ಎಲ್ಲಾ ಸೌಕರ್ಯಗಳನ್ನು ಜಿಲ್ಲೆಗೆ ತಂದ್ರು.. ಸುಧಾಕರ್ ಅವರ ಈ ಕಾರ್ಯಗಳೇ, ಈಸಲದ ಚುನಾವಣೆಯಲ್ಲೂ ಗೆಲುವನ್ನು ತಂದುಕೊಡಲಿದೆ ಅನ್ನೋದು ಹಲವರ ಅಭಿಪ್ರಾಯ.


No comments:

Post a Comment

banner-final

Post Bottom Ad

Pages