ಪ್ರದೀಪ್ ತನಿಖಾ ಸಂಸ್ಥೆಗಳ ಮುಂದೆ ಯಾಕೆ ಹೋಗಲಿಲ್ಲ? ಸೋಶಿಯಲ್ ಮೀಡಿಯಾನೇ ಯಾಕೆ?
ಆರೋಪಗಳನ್ನು ಯಾರು ಯಾರ ಮೇಲೆ ಬೇಕಾದ್ರೂ ಮಾಡಬಹುದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೂ ಮಾಡಬಹುದು. ಪ್ರಧಾನಿ ಮೋದಿ ಬಗ್ಗೆನೂ ಮಾಡಬಹುದು. ಸಿಎಂ ಸಿದ್ದರಾಮಯ್ಯನವರ ಮೇಲೂ ಮಾಡಬಹುದು. ಆದ್ರೆ ಅದನ್ನು ಸಾಬೀತು ಪಡಿಸೋದಕ್ಕೆ ಸೂಕ್ತ ದಾಖಲೆಗಳು ಇರಬೇಕು. ಇಲ್ಲವಾದಲ್ಲಿ ಹಿನ್ನಡೆ ಅನುಭವಿಸೋದು ಗ್ಯಾರಂಟಿ. ಇಲ್ಲಿ ಆಗ್ತಿರೋದು ಅದೇನೆ.. ಸೋಶಿಯಲ್ ಮೀಡಿಯಾ ಮುಂದೆ ಬಂದು ದಾಖಲೆ ಇದೆ ಅಂತಿರೋ ಪ್ರದೀಪ್ ಈಶ್ವರ್ ಮತ್ತು ತಂಡ, ತನಿಖಾ ಸಂಸ್ಥೆಗಳ ಮುಂದೆ ಹೋಗಬಹುದಿತ್ತು. ಭ್ರಷ್ಟಾಚಾರ ನಿಗ್ರಹ ದಳ, ಸಿಐಡಿ, ಸಿಬಿಐ, ಲೋಕಾಯುಕ್ತ ಹೀಗೆ ಅನೇಕ ತನಿಖಾ ಸಂಸ್ಥೆಗಳಿವೆ. ಆದರೆ ಅಲ್ಲೆಲ್ಲೂ ಹೋಗದೇ ಸೋಶಿಯಲ್ ಮೀಡಿಯಾ ಮುಂದೆ ಬಂದು ಆರೋಪಗಳನ್ನು ಮಾಡ್ತಿದ್ದಾನೆ. ಇದನ್ನು ನೋಡಿದ್ರೇನೇ ಗೊತ್ತಾಗುತ್ತೆ. ತನಿಖಾ ಸಂಸ್ಥೆಗಳ ಮುಂದೆ ಆರೋಪಗಳನ್ನು ಸಾಬೀತು ಮಾಡುವಂಥಾ ಯಾವ ದಾಖಲೆಗಳು ಪ್ರದೀಪ್ ಬಳಿ ಇಲ್ಲ ಅಂತ.

ಪ್ರಾಧ್ಯಾಪಕನಿಗೆ ಸಣ್ಣ ಪ್ರಜ್ಞೆನೂ ಇಲ್ವಾ?
ಪ್ರದೀಪ್ ಒಬ್ಬ ಪ್ರಾಧ್ಯಾಪಕ ಅಂತಾರೆ. ಇಂಥಾ ಪ್ರಾಧ್ಯಾಪಕನಿಗೆ ದಾಖಲೆಗಳನ್ನು ಕೋರ್ಟಲ್ಲಿ ಪ್ರೂವ್ ಮಾಡಬೇಕು. ತನಿಖಾಧಿಕಾರಿಗಳಿಗೆ ದೂರು ಕೊಟ್ರೆ, ತನಿಖಾ ಸಂಸ್ಥೆಗಳು ವಿಚಾರಣೆ ನಡೆಸುತ್ತವೆ ಅನ್ನೋ ಸಣ್ಣ ಕಾಮನ್ ಸೆನ್ಸ್ ಕೂಡ ಇಲ್ವಾ? ಖಂಡಿತ ಇದೆ. ಆದ್ರೆ ತನಿಖಾ ಸಂಸ್ಥೆಗಳ ಮುಂದೆನೋ ಅಥವ ಕೋರ್ಟಿನ ಮುಂದೆನೋ ಹೋಗಿ ಕಂಪ್ಲೆಂಟ್ ಕೊಟ್ರೆ, ಪ್ರದೀಪನೇ ಜೈಲಿಗೆ ಹೋಗೋ ಸಾಧ್ಯತೆಗಳು ತುಂಬಾ ದಟ್ಟವಾಗಿವೆ. ಇದನ್ನು ಅರಿತ ಪ್ರದೀಪ್ ಮತ್ತು ಆತನ ತಂಡ, ಎಲೆಕ್ಷನ್ ಗಿಮಿಕ್ ಗಾಗಿ ಸೋಶಿಯಲ್ ಮೀಡಿಯಾವನ್ನ ಬಳಸಿಕೊಳ್ತಿದೆ.
ಸೋಷಿಯಲ್ ಮೀಡಿಯಾಗೆ ನಿರ್ಬಂಧವಿಲ್ಲ. ಇದೇ ಹಲವರಿಗೆ ಬಂಡವಾಳ
ಮಾಧ್ಯಮಗಳಾದ್ರೆ, ಯಾವುದು ಸರಿ. ಯಾವುದು ತಪ್ಪು ಅನ್ನೋದನ್ನ ಬಿತ್ತರಿಸುತ್ತವೆ. ಆದ್ರೆ ಸೋಶಿಯಲ್ ಮೀಡಿಯಾಗಳಲ್ಲಿ ಅಂಥಾ ಯಾವುದೇ ನಿರ್ಬಂಧಗಳಿಲ್ಲ. ಯಾರು ಏನು ಬೇಕಾದ್ರೂ ಹೇಳಬಹುದು. ೇನು ಬೇಕಾದ್ರೂ ಆರೋಪಿಸಬಹುದು. ಸುಳ್ಳಾಗಿರಲಿ.. ಸತ್ಯ ಆಗಿರಲಿ.. ಯಾವುದಕ್ಕೂ ನಿರ್ಬಂಧ ಹೇರೋರಿಲ್ಲ. ಇದನ್ನು ಚೆನ್ನಾಗಿ ಅರಿತ ಪ್ರದೀಪ್, ಸೋಶಿಯಲ್ ಮೀಡಿಯಾಗಳನ್ನೇ ಎಲೆಕ್ಷನ್ ಸ್ಟ್ರಾಟರ್ಜಿಯಾಗಿ ಬಳಸಿಕೊಳ್ತಿದ್ದಾನೆ.
ಆರೋಪಗಳು ಸಾಬೀತಾದ್ರೆ ಎಲ್ಲರಿಗೂ ಶಿಕ್ಷೆ ಇದೆ. ಸಾಬೀತಾಗದಿದ್ರೆ ಸುಳ್ಳಿ ಕೇಸ್ ಕೊಟ್ಟವರಿಗೆ ಕಂಟಕವಿದೆ
ವ್ಯಕ್ತಿ ಯಾರೇ ಆಗಿರಲಿ. ಆತ ನಿಜವಾಗ್ಲೂ ತಪ್ಪು ಮಾಡಿದ್ರೆ, ನ್ಯಾಯಾಲಯ ಖಂಡಿತವಾಗ್ಲೂ ಕ್ರಮ ಕೈಗೊಳ್ಳುತ್ತೆ. ಹುಲ್ಲು ತಿಂದ ಲಾಲೂ ಪ್ರಸಾದ್ ಯಾದವ್ ಜೈಲಿಗೆ ಹೋಗಿದ್ದಾರೆ. ತಮಿಳುನಾಡಿನ ಜಯಲಲಿತಾನೂ ಕಂಬಿ ಎಣಿಸಿದ್ದಾರೆ. ಅಷ್ಟೇ ಯಾಕೆ ಗಾಲಿ ಜನಾರ್ಧನ ರೆಡ್ಡಿನೂ ಶಿಕ್ಷೆ ಅನುಭವಿಸಿದ್ದಾರೆ. ಇಷ್ಟಿದ್ರೂ ಪ್ರದೀಪ್ ಕೋರ್ಟಿನ ಮುಂದೆ ಯಾಕೆ ಹೋಗಲಿಲ್ಲ? ಇದ್ರಿಂದನೇ ಗೊತ್ತಾಗುತ್ತೆ. ಪ್ರದೀಪ್ ಬಂಡಲ್ ಬಿಡ್ತಿದ್ದಾನೆ ಅಂತ. ಕೋರ್ಟಿಗೆ ಹೋದ್ರೆ ಎಲ್ಲಿ ನನ್ನ ವಿರುದ್ಧಾನೇ ಕೋರ್ಟು ಕ್ರಮ ಕೈಗೊಳ್ಳುತ್ತೋ ಅಂತ ಹೆದರಿ, ಫೇಸ್ ಬುಕ್ ಮೊರೆ ಹೋಗಿದ್ದಾನೆ ಪ್ರದೀಪ್
ಪ್ರದೀಪ್ ಬಗ್ಗೆ ಜನ ಏನಂತಾರೆ?
ಈ ಪ್ರದೀಪ್ ಇತಿಹಾಸ ತುಂಬಾನೇ ಕರಾಳವಾಗಿದೆ. ಈತ ಸ್ವಯಂ ಘೋಷಿತ ಪ್ರಾಧ್ಯಾಪಕ ಆಗಿದ್ರೂ, ಯಾವ ಕಾಲೇಜಿನಲ್ಲೂ ಭದ್ರವಾಗಿ ಕೆಲಸ ಮಾಡಲಿಲ್ಲ. ಯಾಕಂದ್ರೆ, ಈತನ ವಕ್ರ ಬುದ್ದಿಯನ್ನು ನೋಡಿದೋರೆಲ್ಲಾ ಈತನಿಗೆ ಗೇಟ್ ಪಾಸ್ ಕೊಟ್ಟಿದ್ದಾರೆ. ಎಲ್ಲೂ ಕೆಲಸ ಸಿಗದೇ ಕೊನೆಗೆ ಡಾ.ಕೆ.ಸುಧಾಕರ್ ಅವರ ಬಳಿ ಹೋಗಿ ಹಣಕ್ಕಾಗಿ ಡಿಮ್ಯಾಂಡ್ ಇಟ್ಟಿದ್ದಾನೆ. ಆದ್ರೆ ಈತನ ಡಿಮ್ಯಾಂಡ್ ಗೆ ಡಾ.ಕೆ.ಸುಧಾಕರ್ ಬಗ್ಗದೇ ಇದ್ದಾಗ, ನವೀನ್ ಕಿರಣ್ ಜೊತೆ ಸೇರಿಕೊಂಡು, ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಂಡು ಅಪ ಪ್ರಚಾರ ಶುರು ಮಾಡಿದ್ದಾನೆ. ದಾಖಲೆಗಳಿದ್ರೆ ಕೋರ್ಟಲ್ಲಿ ಪ್ರೂವ್ ಮಾಡಬಹುದಿತ್ತು. ಆದ್ರೆ ಕೋರ್ಟಿಗೆ ಹೋದ್ರೆ, ಸುಳ್ಳು ಕೇಸ್ ದಾಖಲಿಸಿ ಎಲ್ಲಿ ನ್ಯಾಯಾಧೀಶರು ನನ್ನನ್ನೇ ಜೈಲಿಗೆ ಹಾಕ್ತಾರೋ ಅನ್ನೋ ಭಯ ಪ್ರದೀಪನಿಗಿದೆ. ಇನ್ನು ಪ್ರದೀಪನ ಡಬಲ್ ಗೇಮ್ ಚಿಕ್ಕಬಳ್ಳಾಪುರದ ಜನರಿಗೂ ಗೊತ್ತಿದ್ದು, ಸೋಶಿಯಲ್ ಮೀಡಿಯಾಗಳಲ್ಲೇ ವಾರ್ ಶುರುವಾಗಿದೆ. ಪ್ರದೀಪ್ ಮಾಡಿದ ಆರೋಪಗಳಿಗೆ ಜನರೇ ತಕ್ಕ ತಿರುಗೇಟು ನೀಡ್ತಿದ್ದಾರೆ.
No comments:
Post a Comment